Posts

ಆವರಣಗಳನ್ನು ಕಳಚುತ್ತಾ...

ಮಿಥ್ಯಾವಾಸ್ತವದ ಆವರಣಗಳೂ, ವಾಸ್ತವದ ವೈವಿಧ್ಯಗಳೂ... Case No 1 : ಆ ದಿನ ಮೊದಲುಗೊಂಡದ್ದೇ ವೈ ಫೈ ಕೆಲಸ ಮಾಡುತ್ತಿಲ್ಲವೆಂಬ ಘೋರ ಸತ್ಯದೊಂದಿಗೆ. ಪ್ರಾತಃಕಾಲವೇ ಇಂಟರ್ ನೆಟ್ ಕೈ ಕೊಟ್ಟು ಕೂತುಬಿಟ್ಟರೆ , ಕೆಲಸಗಳು ಮುಂದುವರೆಯೋದು ಹೇಗೆ ? ಮಾಡೆಮ್ ಆಫ್ ಮಾಡಿ ಆನ್ ಮಾಡುತ್ತಾ ಬಾರಿ ಬಾರಿ ಚೆಕ್ ಮಾಡಿದಷ್ಟೂ , ಬೇಗ ಬೇಗ ಕೆಲಸ ಮುಗಿಸುವ ನನ್ನ ಒತ್ತಡ ಹೆಚ್ಚುತ್ತಾ ಹೋಯಿತೇ ವಿನಃ ಅಲ್ಲಿ ಜೀವ ಮಿಣುಕಲಿಲ್ಲ . ಮನಸು ಹತಾಶೆಗೊಂಡಿತು . ಹೀಗಾದರೆ ಈಗ ಚಟ್ನಿ ರುಬ್ಬೋದು ಹೇಗೆ ?!! ನನ್ನ ಒಂದೂವರೆ ವರ್ಷದವಳು ಏಳುವ ಮುನ್ನವೇ ಎಲ್ಲಾ ಮುಗಿಯಬೇಕಲ್ಲಾ ? - ಎಂದುಕೊಳ್ಳುತ್ತಿದ್ದಂತೇ ನನ್ನ ಯೋಚನೆಗೆ ನನಗೇ ಶೇಮ್ ಎನಿಸಿತು . ಚಟ್ನಿ ರುಬ್ಬೋದಕ್ಕೆ ಇಂಟರ್ ನೆಟ್ ಯಾಕೆ ? ಎಲೆಕ್ಟ್ರಿಸಿಟಿ ಸಾಲದೇ ?!! Case No 2 : ನನ್ನ ಒಂದೂವರೆ ವರ್ಷದವಳನ್ನು ಕಟ್ಟಿಕೊಂಡು ಆ ಬಾರಿ ನಾನೊಬ್ಬಳೇ ಮಂಗಳೂರಿಗೆ ಹೋಗಿದ್ದೆ. ಅತ್ತೆ ಮನೆ , ತವರು ಮನೆಯೆಂದು ಕಳೆದು , ಮತ್ತೆ ಬೆಂಗಳೂರಿಗೆ ಮರಳುವ ಯೋಚನೆಗೆ ಅಡ್ಡಿಯಾದದ್ದು ಪಾರ್ಶ್ವವಾಯು ಹೊಡೆದಂತೆ ಆಡುತ್ತಿದ್ದ ನನ್ನ ಮೊಬೈಲ್ ಫೋನ್ ! ಅದೇ ನನ್ನ ಒಂದೂವರೆ ವರ್ಷದವಳ ಕೃಪಾಕಟಾಕ್ಷದಿಂದ ಮೊಬೈಲ್ ನ ಅರ್ಧ ಭಾಗದ ಸ್ಕ್ರೀನ್ ಛಿದ್ರವಾಗಿತ್ತು . ಈಗಾಗಲೇ ಇರುವ e- ವೇಸ್ಟುಗಳ ಜೊತೆ , ನನ್ನ ಫೋನೂ ಲೋಕಾರ್ಪಣೆಯಾಯಿತೆಂಬುದಕ್ಕಿಂತಲೂ ಹೆಚ್ಚಾಗಿ ಕಾಡಿದ್ದು , ಈಗ ನಾನು ಬೆಂಗಳೂರು ತಲುಪುವುದು ಹೇಗೆ ಎಂಬ ಪ್ರಶ್
Recent posts